ನಿಸರ್ಗದತ್ತ

0
296
© ಶಶಿಧರ್ ಸತ್ಯನಾರಾಯಣ್: ಚಿರತೆ ತನ್ನ ಬೇಟೆಯೊಂದಿಗೆ - ಚಿತ್ರೀಕರಿಸಿದ ಸ್ಥಳ:ಕಬಿನಿ ,ಕರ್ನಾಟಕ. ತಾಂತ್ರಿಕ ಮಾಹಿತಿ: ಕ್ಯಾಮೆರಾ ನಿಕೋನ್ D500, ಲೆನ್ಸ್ - 200-500mm , Mode - ಅಪರ್ಚರ್ ಪ್ರಿಯೋರಿಟಿ f5.6, ಷಟರ್ ಸ್ಪೀಡ್ 1/800, ಐಸ್ಓ 500

ಶ್ರೀ ಶಶಿಧರ್ ಹಾಗು ಶ್ರೀಮತಿ ಕವಿತಾ ದಂಪತಿಗಳು ಐಟಿಫೀಲ್ಡ್ ನಲ್ಲಿದ್ದರೂ ಸಹ ಇವರಿಗಿರುವ ಪ್ರಕೃತಿಯ ಪ್ರೇಮ ಇವರನ್ನು ಕಾಡಿನತ್ತ ಎಳೆದುಕೊಂಡು ಹೋಗುತ್ತಿರುತ್ತದೆ. ಇವರು ಸುಮಾರು ೧೨ ವರ್ಷದ ದಾಂಪತ್ಯದಲ್ಲಿ ದೇಶವಿದೇಶಗಳಲ್ಲಿರುವ ಕಾಡುಗಳನ್ನು ಸುತ್ತಿ, ಹಲವಾರು ಪ್ರಾಣಿ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದ್ದಿದ್ದಾರೆ. ೨೦೦೫ ರಿಂದ ಸಾಂದರ್ಭಿಕ ಛಾಯಾಚಿತ್ರಗಳನ್ನುತೆಗೆಯುತ್ತಿದ್ದರೂ, ೨೦೦೭ರಲ್ಲಿ ಕೆ-ಗುಡಿಗೆ ಹೋದಾಗ ಆದ ಅನುಭವ ಇವರನ್ನು ಗಂಭೀರ ಛಾಯಾಗ್ರಹಣದತ್ತಎಳೆದಿತ್ತು. ೨೦೦೮ ರಲ್ಲಿ ಮಸೈ ಮಾರಗೆ  (ಆಫ್ರಿಕಾ) ಹೋಗುವ ಮುನ್ನ  ಡಿ ಎಸ್  ಎಲ್ ಆರ್ ಕ್ಯಾಮೆರಾವನ್ನು ಖರೀದಿಸದರು. ಅಲ್ಲಿ ಇವರಿಗೆ ಛಾಯಾಗ್ರಹಣ ಮಾಡುವಾಗ ಅದ್ಭುತ ಅನುಭವಗಳಾದವು. ಆಫ್ರಿಕಾದಲ್ಲಿ ನೋಡಿದ ವೈಲ್ಡ್ ಬೀಸ್ಟ್ ವಲಸೆ ಇವರ ಕಣ್ಣಿಗೆ ಕಟ್ಟಿದಂತೆ ಇನ್ನೂ ಉಳಿದಿದೆ ಎಂದು ಶಶಿಧರ್ ಅವರು ಹೇಳುತ್ತಾರೆ . ಕವಿತಾ ಅವರಿಗೆ ಆಫ್ರಿಕಾದಲ್ಲಿ ಮೊದಲ ಬಾರಿಗೆ ೨೦ ಅಡಿ ದೂರದಲ್ಲಿ ಕಂಡ ಜಿರಾಫೆ ಈಗಲೂ ನೆನೆದರೆ ರೋಮಾಂಚನ ಉಂಟು ಮಾಡುತ್ತದೆ. ಆಫ್ರಿಕಾದಿಂದ ಬಂದ ಮೇಲೆ ಶಶಿಧರ್ ರವರು ಹಲವಾರು ವರ್ಕ್ ಶಾಪ್ಗಳಿಗೆ ಹೋಗಿ ಛಾಯಾಗ್ರಹಣದ ತಾಂತ್ರಿಕತೆಯನ್ನು ತಿಳಿದುಕೊಂಡರು.

ಕವಿತಾರವರೂ ಕೂಡ ಒಂದೆರಡು ವರ್ಕ್ ಶಾಪ್ಗಳನ್ನುಅಟೆಂಡ್ ಮಾಡಿ ಕ್ಯಾಮೆರಾ ಬಗ್ಗೆ ಕಲಿತುಕೊಂಡು, ತನ್ನ ಗಂಡನ ಜೊತೆ ಛಾಯಾಗ್ರಹಣ ಮಾಡಲು ಶುರುಮಾಡಿದರು.

ಈ  ದಂಪತಿಗಳು ದೇಶ ವಿದೇಶದ ಹಲವಾರು ಕಾಡುಗಳಿಗೆ ಹೋಗಿದ್ದಾರೆ, ಇವರಿಗೆ ಕಬಿನಿಯಲ್ಲಿ ಚಿರತೆಯು ಲಂಗೂರ್ ಒಂದನ್ನು ಬೇಟಿಯಾಡಿದ ದೃಶ್ಯ ಮರೆಯದ ನೆನಪು. ಶಶಿಧರ್  ಅವರ ಕೆಲವು ಛಾಯಾಚಿತ್ರಗಳು ನ್ಯಾಷನಲ್ ಜಿಯಾಗ್ರಫಿ ಜಾಲತಾಣದಲ್ಲಿಪ್ರಕಟಣೆಯಾಗಿವೆ.

ಇವರು ಹೊಸಬರಿಗೆ ಛಾಯಾಚಿತ್ರಣದ ಬಗ್ಗೆ ಒಂದು ಕಿವಿ ಮಾತು ಹೇಳುತ್ತಾರೆ -“ಛಾಯಾಚಿತ್ರಗಳನ್ನು ತೆಗೆಯಲುಮುಖ್ಯವಾಗಿ ಬೇಕಾದುದು ಬಾಧ್ಯತೆ ಹಾಗು ತಾಳ್ಮೆ. ಛಾಯಾಚಿತ್ರ ಉಪಕರಣವನ್ನು ಖರೀದಿಸುವ ಮುನ್ನ ಉಪಕರಣವನ್ನು ಬಾಡಿಗೆಗೆ ಪಡೆದು ಪ್ರಯತ್ನ ಮಾಡಿ. ಕೊನೆಯದಾಗಿ ನಿಮ್ಮ ಕೈಯಲ್ಲಿ ಇರುವ ಕೆಲಸವನ್ನು ಬಿಟ್ಟು ಛಾಯಾಗ್ರಾಹಕನಾಗುತ್ತೇನೆ ಅನ್ನುವ ಮುನ್ನ ಒಂದು ಸಲ ಯೋಚಿಸಿ”.

 ಶ್ರೀ ಶಶಿಧರ್ ಹಾಗು ಶ್ರೀಮತಿ ಕವಿತಾ.

ನಿಮ್ಮ ಕಾಮೆಂಟ್

Please enter your comment!
Please enter your name here