ದಿ ಗಾರ್ಡ್ ಬುಕ್

0
187

“ದಿ ಗಾರ್ಡ್ ಬುಕ್ (The Guardbook)” ಎಂಬುದೊಂದು ಸರ್ಕಾರೇತರ ಸಂಸ್ಥೆ (NGO). ಭಾರತದ ಅರಣ್ಯ ಸಿಬ್ಬಂದಿಗಳ ಬೆಂಬಲವೇ ಈ ಸಂಸ್ಥೆಯ ಮುಖ್ಯ ಉದ್ದೇಶ.

ಕಳೆದೆರಡು ವರ್ಷಗಳಲ್ಲಿ ಈ ಸಂಸ್ಥೆಯು ಭಾರತದ ಹಲವಾರು ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿನ ಸಿಬ್ಬಂದಿಗಳಿಗೆ ಸಹಾಯ ಮಾಡಿದೆ.

ಈ ಸಂಸ್ಥೆಯು ಯಾರೊಬ್ಬರಿಂದಲೂ ನಗದು ತೆಗೆದುಕೊಳ್ಳುವುದಿಲ್ಲ. ಪ್ರಾಯೋಜಕರು ತಾವೇ ಖುದ್ದು ಸಾಮಾನುಗಳನ್ನು ಖರೀದಿ ಮಾಡಿ, ಅವುಗಳನ್ನು ಸಂಸ್ಥೆಯ ಮುಖ್ಯಸ್ಥರಿಗೆ ಕಳಿಸುವಂತೆ ಸಂಸ್ಥೆಯು ಕೇಳಿಕೊಳ್ಳುತ್ತದೆ. ಸಂಸ್ಥೆಯ ಮುಖ್ಯಸ್ಥರು, ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ, ಆ ಸಾಮಾನುಗಳು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಲುಪುವಂತೆ ನೋಡಿಕೊಳ್ಳುತ್ತಾರೆ.

“ದಿ ಗಾರ್ಡ್ ಬುಕ್” ಸಂಸ್ಥೆಯು ಈ ಕೆಳಕಂಡ ರಾಷ್ಟ್ರೀಯ ಉದ್ಯಾನವನಗಳಲ್ಲಿ ತನ್ನ ಸಹಾಯಹಸ್ತ ನೀಡಿದೆ.

  • ಪೆಂಚ್ ರಾಷ್ಟ್ರೀಯ ಉದ್ಯಾನವನ (ಸೇಒನಿ – ಮಧ್ಯಪ್ರದೇಶ) : ಬೂಟುಗಳು, ಚಳಿಗಾಲ ಮತ್ತು ಮಳೆಗಾಲದ ಜಾಕೆಟ್ ಗಳು, ಪರಿಸರ ಕಾಳಜಿಯ ಹೊಗೆರಹಿತ ಒಲೆಗಳು, ೧ ಕೆ ವಿ ಸೌರಶಕ್ತಿ ಕೇಂದ್ರ
  • ಪೆಂಚ್ ರಾಷ್ಟ್ರೀಯ ಉದ್ಯಾನವನ (ಕುರ್ಸಾಪುರ್ – ಮಹಾರಾಷ್ಟ್ರ) : ಸೌರ ಹಾಗು ಡೈನಮೊ ಲಾಟೀನುಗಳು
  • ಕಾನ್ಹ ರಾಷ್ಟ್ರೀಯ ಉದ್ಯಾನವನ : ಚಳಿಗಾಲ ಮತ್ತು ಮಳೆಗಾಲದ ಜಾಕೆಟ್ ಗಳು
  • ಬಾಂಧವಗಡರಾಷ್ಟ್ರೀಯ ಉದ್ಯಾನವನ : ಬೇಟೆ ವಿರೋಧಿ ಶಿಬಿರಗಳಲ್ಲಿ ಸೌರ ದೀಪ ವ್ಯವಸ್ಥೆ, ೧ ಕೆ ವಿ ಸೌರಶಕ್ತಿ ಕೇಂದ್ರ
  • ನೌರದೇಹಿ ರಾಷ್ಟ್ರೀಯ ಉದ್ಯಾನವನ : ಬೇಟೆ ವಿರೋಧಿ ಶಿಬಿರಗಳಲ್ಲಿ ಸೌರ ದೀಪ ವ್ಯವಸ್ಥೆ
  • ಗಾಂಧಿಸಾಗರ್ ರಾಷ್ಟ್ರೀಯ ಉದ್ಯಾನವನ : ಬೇಟೆ ವಿರೋಧಿ ಶಿಬಿರಗಳಲ್ಲಿ ಸೌರ ದೀಪ ವ್ಯವಸ್ಥೆ
  • ಪಲಪುರ್ ಕುನೋ ರಾಷ್ಟ್ರೀಯ ಉದ್ಯಾನವನ : ಬೇಟೆ ವಿರೋಧಿ ಶಿಬಿರಗಳಲ್ಲಿ ಸೌರ ದೀಪ ವ್ಯವಸ್ಥೆ
  • ಸುಂದರಬನ ರಾಷ್ಟ್ರೀಯ ಉದ್ಯಾನವನ : ಅಕ್ವಾಗಾರ್ಡ್ ನೀರು ಶುದ್ದೀಕರಣ ಬಾಟಲಿಗಳು
  • ಬಕ್ಸ ಹುಲಿ ಸಂರಕ್ಷಣಾ ಕೇಂದ್ರ : ಸೌರ ಹಾಗು ಡೈನಮೊ ಲಾಟೀನುಗಳು
  • ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರ (ಕಬಿನಿ) : ಅಧಿಕ ಶಕ್ತಿಯ ಡೈನಮೊ ಟಾರ್ಚ್ ಗಳು

ಈ ಸಂಸ್ಥೆಯ ಬಗ್ಗೆ ಹೆಚ್ಚು ವಿವರಗಳನ್ನು ಅವರ ಜಾಲತಾಣದಿಂದ ಪಡೆಯಬಹುದು : theguardbook.com

ಸಂಸ್ಥೆಯ ಫೇಸ್ಬುಕ್ ಪೇಜ್ : https://www.facebook.com/groups/879450602145991/?ref=bookmarks

ಮೂಲ ಬರಹ: ವಿಶ್ರುತ್ (ದಿ ಗಾರ್ಡ್ ಬುಕ್ ಸಂಸ್ಥೆಯ ಸದಸ್ಯ)

ಕನ್ನಡ ಅನುವಾದ: ಕಾಡುನಾಡು ತಂಡ.

ನಿಮ್ಮ ಕಾಮೆಂಟ್

Please enter your comment!
Please enter your name here