ಸಂಚಿಕೆ ೧ – ಛಾಯಾಗ್ರಹಕರ ಸಂದರ್ಶನ – ಸುನಿಲ್ ಸಾಚಿ

0
139391

 ಸಂಚಿಕೆಯ ಛಾಯಾಗ್ರಾಹಕರು ಶ್ರೀ ಸುನಿಲ್ ಸಾಚಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಜನಿಸಿದ ಇವರು, ಹೆಚ್ ಪಿ ಸಂಸ್ಥೆಯಲ್ಲಿ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ಧಾರೆ. ಇವರ ತಂದೆ ಶ್ರೀ ಜಯರಾಮ್ ಮತ್ತು ತಾಯಿ ಶ್ರೀಮತಿ ಸುಮತಿ.

ಸುನಿಲ್ ಅವರು ಒಬ್ಬ ಉತ್ಸಾಹಿ ಛಾಯಾಗ್ರಾಹಕರಾಗಿದ್ದು, ಉಭಯಚರಗಳು ಹಾಗೂ ಸರೀಸೃಪಗಳ ಬಗೆಗೆ ಅತೀವ ಒಲವು ಹೊಂದಿರುವರು. ಈ ಒಲವನ್ನು ಇವರ ಛಾಯಾಚಿತ್ರಗಳಲ್ಲಿ ನಾವು ಕಾಣಬಹುದು.

ಈ ಸಂದರ್ಶನದ ಮೂಲಕ ನಾವು ಇವರ ಛಾಯಾಗ್ರಹಣ ಕ್ಷೇತ್ರದ ಪಯಣವನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದೆಇಡುತ್ತಿದ್ದೇವೆ.

ಬಿದಿರು ಮಂಡಲ ಹಾವು

ಛಾಯಾಗ್ರಹಣದ ಬಗ್ಗೆ ನಿಮಗೆ ಅಭಿರುಚಿ ಬೆಳೆಯಲುಕಾರಣವೇನು? 

ನಾನು ೬ ನೇ ತರಗತಿಯಲ್ಲಿರುವಾಗಲೇ ಮೈಸೂರಿನಲ್ಲಿರುವ ನನ್ನದೊಡ್ಡಪ್ಪನ ಹಾಟ್ ಶಾಟ್ ಕ್ಯಾಮೆರಾದಲ್ಲಿ ಆಟವಾಡುತ್ತಿದ್ದೆ.

ಶಾಲೆಯಲ್ಲಿ ಓದುತ್ತಿದ್ದಾಗ ಕನ್ನಡ ಪಠ್ಯಕ್ರಮದಲ್ಲಿ ಪೂರ್ಣ ಚಂದ್ರ ತೇಜಸ್ವಿಯವರ “ಪರಿಸರದ ಕಥೆಗಳು” ಎಂಬ ಪಾಠವಿತ್ತು. ಕನ್ನಡದ ಗುರುಗಳಾಗಿದ್ದ ಪ್ರಸಾದ್ ಸರ್ ರವರು ಈ ಪಾಠವನ್ನು ವಿದ್ಯಾರ್ಥಿಗಳಿಗೆ ತುಂಬಾ ಮನಮುಟ್ಟುವಂತೆ ವಿವರಿಸಿದ್ಧರು. ಛಾಯಾಗ್ರಹಣ ಕ್ಷೇತ್ರದಲ್ಲಿನ  ತೇಜಸ್ವಿಯವರ ಸಾಧನೆ, ಅವರು ಅದಕ್ಕಾಗಿ ಪಟ್ಟ ಶ್ರಮ ಹಾಗೂ ಅವರು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿಯನ್ನು ನಮ್ಮ ಪ್ರಸಾದ್ ಸರ್ ಕಣ್ಣಿಗೆ ಕಟ್ಟುವಂತೆ ತಿಳಿಸಿದ್ಧರು. ೧೦ ನೇ ತರಗತಿಯಲ್ಲಿ ತೇಜಸ್ವಿಯವರನ್ನು ಕುರಿತು ಕನ್ನಡದಲ್ಲಿ ಪ್ರಾಜೆಕ್ಟ್ ಒಂದನ್ನು ಮಾಡಲು ಅವಕಾಶ ಸಿಕ್ಕಿತು. ಅದೇ ಮೊದಲ ಸಲ ತೇಜಸ್ವಿಯವರನ್ನು ಭೇಟಿ ಮಾಡಿ ಮತ್ತಷ್ಟು ಅವರ ಬಗ್ಗೆ ತಿಳಿದುಕೊಂಡೆ. ಹಾಗಾಗಿ ತೇಜಸ್ವಿಯವರ ಛಾಯಾಗ್ರಹಣ ಹಾಗೂ  ಪ್ರಸಾದ್ ಸರ್ ರವರ ಬೋಧನೆ ನನಗೆ ಮೊಟ್ಟ ಮೊದಲ ಸ್ಫೂರ್ತಿ ಎಂದರೆ ತಪ್ಪಾಗದು.

ಕಪ್ಪೆಗಳ ಬಗೆಗಿನ ನಿಮ್ಮಆಸಕ್ತಿಯ ಬಗ್ಗೆ ತಿಳಿಸಿ 

ಮಳೆಗಾಲದಲ್ಲಿ ಮನೆ ಅಂಗಳದಲ್ಲಿ ಸಾಕಷ್ಟು ಕಪ್ಪೆಗಳನ್ನು ನೋಡ್ತಾಇದ್ವಿ. ಹಾಗೆ ನಿಧಾನವಾಗಿ ಕಪ್ಪೆಗಳ ಮೇಲೆ ನನ್ನ ಕುತೂಹಲ ಬೆಳೆಯುತ್ತಾ ಹೋಯ್ತು. ಉಭಯಚರಗಳ ಬಗ್ಗೆ ಹೆಚ್ಚು ಹೆಚ್ಚು ಓದಲಿಕ್ಕೆ ಶುರು ಮಾಡಿದೆ. ಆಗ ನನಗೆ ಕಂಡುಬಂದ ಅಂಶವೆಂದರೆ ಬಹುತೇಕ ಎಲ್ಲ ಮಾಹಿತಿಗಳೂ ಬ್ರಿಟಿಷರಿಂದ ವ್ಯಾಖ್ಯಾನಿಸಲ್ಪಟ್ಟಿದ್ದು ಎಂದು.  ನಮ್ಮ ಪಶ್ಚಿಮ ಘಟ್ಟಗಳಲ್ಲಿ ವಿವಿಧ ಬಗೆಯ ಉಭಯಚರಗಳನ್ನು ಕಾಣಬಹುದು. ಅವುಗಳ ಬಗ್ಗೆ ಏಕೆ ಅನ್ವೇಷಣೆ ಮಾಡಬಾರದು ಎಂಬ ಯೋಚನೆ ಮನಸ್ಸಿಗೆ ಬಂತು. ಹೀಗೆ ಮಾಡುವುದರಿಂದ ಉಭಯಚರಗಳ ಬಗ್ಗೆ ಜನರಲ್ಲಿರುವ ಸಾಕಷ್ಟು ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಬಹುದೆಂದು ಅನ್ನಿಸಿತು.

ಪೊದೆ ಕಪ್ಪೆ

ನಿಮಗೆ ಹಾವುಗಳ ಬಗ್ಗೆ ಆಸಕ್ತಿ ಬೆಳೆದಿದ್ದು ಹೇಗೆ? 

ನಾನು ಚಿಕ್ಕವನಿದ್ಧಾಗ ಮನೆಯಲ್ಲಿ ಪಾರಿವಾಳಗಳನ್ನು ಸಾಕಿದ್ಧೆವು. ಅವುಗಳ ಮೊಟ್ಟೆ ತಿನ್ನಲು ಹಾವುಗಳು ಬರುತ್ತಿದ್ಧವು. ಆಗ ನನಗೆ ಹಾವನ್ನು ಕಂಡರೆ ಕೇವಲ ಭಯವಿತ್ತಷ್ಟೆ. ಪಿ ಯು ಸಿ ಯಲ್ಲಿದ್ಧಾಗ ಪ್ರಾಣಿ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮವೊಂದನ್ನು ನೋಡಿದೆ. ಆ ಕಾರ್ಯಕ್ರಮದಿಂದ ಕೇವಲ ಹುಲಿ, ಚಿರತೆ, ಜಿಂಕೆ ಇತ್ಯಾದಿಗಳನ್ನಷ್ಟೇ ಅಲ್ಲದೆ ಹಾವುಗಳನ್ನು ಸಂರಕ್ಷಿಸುವುದು ಕೂಡಾ ಅಷ್ಟೇ ಮುಖ್ಯ ಎಂಬ ಅರಿವಾಯಿತು. ಅಂದಿನಿಂದ ಹಾವುಗಳ ಬಗ್ಗೆ ನನ್ನ ಕುತೂಹಲ ಹೆಚ್ಚಾಯಿತು. ಮೊದಲ ಬಾರಿಗೆ ನಾಗರ ಹಾವೊಂದನ್ನು ರಕ್ಷಿಸುವ ಅವಕಾಶ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿದ್ಧಾಗ ದೊರಕಿತು. ಅಂದಿನಿಂದ ಇಂದಿನವರೆಗೂ ಹಾವುಗಳನ್ನು ರಕ್ಷಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ಧೇನೆ. ಛಾಯಾಗ್ರಹಣದ ಬಗೆಗಿದ್ದ ಒಲವು, ಹಾವುಗಳ ಛಾಯಾಚಿತ್ರ ತೆಗೆಯುವ ಮೂಲಕ ಅವುಗಳ ಸೌಂದರ್ಯವನ್ನು ಜನರಿಗೆ ತೋರಿಸಲು ಅನುಕೂಲವಾಯಿತು. ಹಾಗೆಯೇ ಹಾವು ಸ್ವಾಭಾವಿಕವಾಗಿ ಹಾನಿಕಾರಕ ಪ್ರಾಣಿಯಲ್ಲ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿಯೂ ಸಹಕಾರಿಯಾಯಿತು.

ಸ್ನೇಕ್ಸ್ ಆಫ್ ಕೂರ್ಗ್” ಪುಸ್ತಕದ ಬಗ್ಗೆ ತಿಳಿಸಿ 

ಕೊಡಗಿನವರಾದ ಸತೀಶ್ ಎಂಬುವವರ ಹಾವು ರಕ್ಷಣಾಕಾರ್ಯಕ್ರಮವನ್ನೊಮ್ಮೆ ದೂರದರ್ಶನದಲ್ಲಿ ನೋಡಿದೆ.ಅವರನ್ನು ಸಂಪರ್ಕಿಸಿ, ನಾನೂ ಕೂಡ ಹಾವು ಸಂರಕ್ಷಣೆಯಕಾರ್ಯದಲ್ಲಿ ತೊಡಗಿರುವ ಬಗ್ಗೆ ತಿಳಿಸಿದೆ. ಅವರನ್ನುಭೇಟಿಯಾದಾಗ, ಅವರು ಕೊಡಗಿನಲ್ಲಿರುವ ಹಾವುಗಳ ಬಗ್ಗೆಒಂದು ಪುಸ್ತಕ ಬರೆಯಬೇಕೆಂದಿರುವುದು ನನಗೆ ತಿಳಿದು ಬಂತು.ಹೀಗೆ ನನ್ನಲ್ಲಿದ್ದ ಹಾವುಗಳ ಛಾಯಾಚಿತ್ರಗಳು “ಸ್ನೇಕ್ಸ್ ಆಫ್ಕೂರ್ಗ್”  ಎಂಬ ಪುಸ್ತಕಕ್ಕೆ ಕೊಡುಗೆಯಾಯಿತು.

ಹೆಚ್ ಪಿ ಸೇರಿದ ನಂತರದ ದಿನಗಳ ಬಗ್ಗೆ ತಿಳಿಸಿ 

ಹೆಚ್ ಪಿ ಸೇರಿದ ನಂತರ ಸಮಾನ ಮನಸ್ಕರೊಡನೆ ಟ್ರೆಕ್ಕಿಂಗ್ ಗೆಹೋಗಲಾರಂಭಿಸಿದೆ. ಆಗುಂಬೆಯಲ್ಲಿ ನಡೆದ “ಕಿಂಗ್ ಕೋಬ್ರಾಟೆಲಿಮೆಂಟರಿ ಪ್ರಾಜೆಕ್ಟ್”ನಲ್ಲಿ ಕೆಲಸ ಮಾಡುವ ಅವಕಾಶಲಭಿಸಿದ್ದು, ಪಶ್ಚಿಮ ಘಟ್ಟಗಳ ಕಾಡನ್ನು ಇನ್ನೂ ಹೆಚ್ಚಾಗಿಅನ್ವೇಷಿಸುವಲ್ಲಿ ಸಹಕಾರಿಯಾಯಿತು. ಈ ಅವಕಾಶವು ನನ್ನಜೀವನವನ್ನೇ ಬದಲಾಯಿಸಿತು. ತದನಂತರ ನಾನು ಪದೇ ಪದೇಪಶ್ಚಿಮ ಘಟ್ಟದಲ್ಲಿರುವ ಹಾವುಗಳ ಹಾಗೂ ಉಭಯಚರಗಳಛಾಯಾಚಿತ್ರಗಳನ್ನು ತೆಗೆಯಲು ಏಕಾಂಗಿಯಾಗಿಹೋಗಲಾರಂಭಿಸಿದೆ. ಹೆಚ್ಚಾಗಿ ಸುತ್ತಲಿನ ಹಳ್ಳಿ ಜನರು ನನಗೆ ಅವುಗಳನ್ನು ಹುಡುಕಲು ಸಹಾಯ ಮಾಡುತ್ತಿದರು.

ನಿಮಗೆ ದೊರೆತಿರುವ ಪ್ರಶಸ್ತಿ ಹಾಗೂ  ಪುರಸ್ಕಾರಗಳ ಬಗೆಗೆ ತಿಳಿಸಿ 

ಹೆಚ್ ಪಿ ಸಂಸ್ಥೆ “ಗೋ ಗ್ರೀನ್ ಇನಿಶಿಯೇಟಿವ್” ಅಡಿಯಲ್ಲಿ ನನಗೆಪ್ರಶಸ್ತಿ ನೀಡಿದೆ. “ಸಾಂಕ್ಚುರಿ ಏಷ್ಯಾ ಅಂಡ್ ಲಾಸ್ಟ್ ಆಂಫಿಬಿಯನ್ಸ್ಆಫ್ ಇಂಡಿಯಾ” ಸ್ಪರ್ಧೆಯಲ್ಲಿ ನನ್ನ ಛಾಯಾಚಿತ್ರಕ್ಕೆ ಮೂರನೇಸ್ಥಾನ ದೊರೆತಿದೆ. ಇವುಗಳಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳುಹಾಗೂ ಮನ್ನಣೆಗಳು ದೊರೆತಿವೆ.

ಛಾಯಾಗ್ರಹಣದಲ್ಲಿ ತೊಡಗಲು ಬಯಸುವ ಹೊಸಬರಿಗೆ ನಿಮ್ಮಸಲಹೆ ಏನು? 

ವನ್ಯ ಜೀವಿಗಳ ಛಾಯಾಗ್ರಹಣಕ್ಕೆ ತೊಡಗುವ ಮುಂಚೆ ಅವುಗಳಬಗ್ಗೆ ಅಧ್ಯಯನ ಮಾಡುವುದು ತುಂಬಾ ಮುಖ್ಯ. ಅವುಗಳ ಸಹಜವಾಸಸ್ಥಾನ, ನಡವಳಿಕೆ, ಆಹಾರಕ್ರಮ ಇವೆಲ್ಲದರ ಬಗ್ಗೆತಿಳಿದುಕೊಳ್ಳಬೇಕು. ಕ್ಯಾಮೆರಾವನ್ನು ಉಪಯೋಗಿಸುವ ರೀತಿಯನ್ನುವರ್ಕ್ ಶಾಪ್ ಗಳ ಮೂಲಕ ಅಥವಾ ಆನ್ಲೈನ್ ವಿಡಿಯೋ ಗಳಮೂಲಕ ತಿಳಿದುಕೊಳ್ಳಬಹುದು. ವನ್ಯ ಜೀವಿ ಛಾಯಾಗ್ರಹಣಕ್ಕೆಅತೀವ ತಾಳ್ಮೆ ಅತ್ಯಗತ್ಯ. ಏಕೆಂದರೆ ಕೆಲವೊಮ್ಮೆ ಒಂದು ಚಿತ್ರಕ್ಕಾಗಿವರ್ಷಗಟ್ಟಲೆ ಕಾಯಬೇಕಾಗಬಹುದು.

ಕಪ್ಪೆ : ರಕೊಫೊರಸ್ ಲ್ಯಾಟಲಿಸ್
ಉಬ್ಬು-ಮೂಗಿನ ಮಂಡಲದ ಹಾವು
ಕಪ್ಪೆ : ರಓರ್ಚೆಸ್ಟಸ್ ಇಂಡಿಗೋ
© ಸುನಿಲ್ ಸಾಚಿ

ನಿಮ್ಮ ಕಾಮೆಂಟ್

Please enter your comment!
Please enter your name here