ಮ್ಯಾಕ್ರೋ ಜಗತ್ತು

0
276

ಪುಟಾಣಿ ಜೀವಿಗಳ ಇಲ್ಲವೇ ವಸ್ತುಗಳ ಸೌಂದರ್ಯವನ್ನು ಕಣ್ಣಿಗೆ ಕಾಣುವ ಹಾಗು ಮನಸ್ಸಿಗೆ  ಮುಟ್ಟುವ ರೀತಿಯಲ್ಲಿ ತೋರಿಸುವ ಒಂದು ಛಾಯಾಚಿತ್ರ ಕಲೆ, ಮ್ಯಾಕ್ರೊ  ಛಾಯಾಗ್ರಹಣ.

ನನ್ನಲ್ಲಿ ಬೇಸಿಕ್ ಎಸ್ ಎಲ್ ಆರ್ ಕ್ಯಾಮೆರಾ ಮತ್ತು ಕಿಟ್ ಲೆನ್ಸ್ ಇದೆ, ಮ್ಯಾಕ್ರೋ  ಲೆನ್ಸ್ ಗಳು ಇಲ್ಲ, ಆದರೆ ನನಗೆಮ್ಯಾಕ್ರೋ ಛಾಯಾಗ್ರಹಣ ಇಷ್ಟ.  ನಿಮ್ಮನ್ನು ಈ ಪ್ರಶ್ನೆ ಕಾಡುತ್ತಿದ್ದರೆ , ಅದಕ್ಕೆ ಉತ್ತರ  ರಿವರ್ಸ್ ರಿಂಗ್.

ನಿಮ್ಮ ಕಿಟ್ ಲೆನ್ಸ್ ವ್ಯಾಸಕ್ಕೆ ಅನುಗುಣವಾಗಿ ರಿವರ್ಸ್ ರಿಂಗ್ ಖರೀದಿಸಿ. ಇದನ್ನು ನಿಮ್ಮ ಕಿಟ್ ಲೆನ್ಸಿನ ಮುಂಭಾಗಕ್ಕೆ ಜೋಡಿಸಿ. ಲೆನ್ಸ್ ಅನ್ನು ಮಾನ್ಯುಯಲ್ ಮೋಡಿಗೆ ಬದಲಾಯಿಸಿ. ಕ್ಯಾಮೆರಾ ಆಫ್ ಮಾಡಿ. ಲೆನ್ಸನ್ನು ಹೊರ ತೆಗೆದು ತಿರುಗಿಸಿ ಮತ್ತೆ ಕ್ಯಾಮೆರಾಗೆ ಜೋಡಿಸಿ. ರಿವರ್ಸ್ ರಿಂಗ್ ನಿಮಗೆ ಲೆನ್ಸ್ ಅನ್ನು ತಿರಗಿಸಿ ಕ್ಯಾಮೆರಾಗೆ ಅಳವಡಿಸಲು ಸಹಾಯ ಮಾಡುತ್ತದೆ. ಈಗ ನಿಮ್ಮ ಲೆನ್ಸ್ ಭೂತಗನ್ನಡಿಯಂತೆ ಕೆಲಸ ಮಾಡುತ್ತದೆ.

ಕೆಲವು ನೆನಪಿಡಬೇಕಾದ ವಿಷಯಗಳು

  • ನಿಮ್ಮ ಕ್ಯಾಮೆರಾದ ಆಟೋ ಫೋಕಸ್, ಲೆನ್ಸ್ ರಿವರ್ಸ್ ಮಾಡಿದಾಗ ಕೆಲಸ ಮಾಡುವುದಿಲ್ಲ.
  • ಕ್ಯಾಮೆರಾವನ್ನು ಹಿಡಿದು ಹಿಂದೆ-ಮುಂದೆ ಮಾಡಿ ಫೋಕಸ್ ಮಾಡಬೇಕು.
  • ನೀವು ತೆಗೆಯುವ ಕ್ರಿಮಿಕೀಟಗಳು ನಿಮ್ಮ ಲೆನ್ಸ್ ಒಳಗೆ ಹೋಗದಂತೆ ಜಾಗ್ರತೆ ವಹಿಸಿ.

© ಸುಧೀಂದ್ರ ರಾವ್ ರಿವರ್ಸ್ ರಿಂಗ್ ಬಳಸಿ ತೆಗೆದ ಛಾಯಾಚಿತ್ರ

ನಿಮ್ಮ ಕಾಮೆಂಟ್

Please enter your comment!
Please enter your name here