ಸಂಚಿಕೆ ೩ – ಕವನಗಳು – ಕಾಳಜಿ-ಕಳಕಳಿ

0
75

ಕಾಳಜಿ-ಕಳಕಳಿ

ತಿಂಗಳಿನ ಎದೆ ಮೇಲೆ
ಕಾಲಿಟ್ಟು ಬಂದವರೆ;
ಮಂಗಳನ ಅಂಗಳದಿ
ಜೀವನವ ಕಂಡವರೆ!

ನೂರೊಂದು ಮಹಡಿಗಳ
ಕಟ್ಟಡವ ಕಟ್ಟುವರೆ;
ಹಾರಿ ಸಾಗರದಾಚೆ
ಊರುಗಳ ಸೇರುವರೆ!

ಹೊರಗೊಂದು ನೆಲೆಯನ್ನು
ಹುಡುಕುವಾ ಮುನ್ನ;
ನೆಲೆ ಕೊಟ್ಟವಳ ಬಗೆಗೆ
ಕಾಳಜಿಯು ಚೆನ್ನ!

ನಮಗೊಂದೆ ದೇಗುಲವು
ಭೂಮಿತಾಯಿ;
ಅವಳ ಪೊರೆವುದೆ ನಮ್ಮ
ಪರಮ ಧ್ಯೇಯ;

ಕಂಕಣವ ತೊಟ್ಟು
ಹಬ್ಬಿಸಬೇಕು ಹಸಿರು;
ಇಂಗಿ ಹೋಗುವ ಮುನ್ನ
ಇಳೆಯ ಉಸಿರು;

-ಅರುಣ್ ಅಂಚೆ

ನಿಮ್ಮ ಕಾಮೆಂಟ್

Please enter your comment!
Please enter your name here