ಉಡಗಳ ಕಾಳಗದ ಅಪರೂಪದ ದೃಶ್ಯ

0
242

ದಕ್ಷಿಣಕನ್ನಡದ ಪುತ್ತೂರಿನ ಸಾಮೆತಡ್ಕ ಫಾರ್ಮ್ನಲ್ಲಿ ಗುರುವಾರ ಉಡಗಳ (Monitor Lizards) ಕಾಳಗದ ಅಪರೂಪದ ದೃಶ್ಯ ಸೆರೆ ಹಿಡಿಯಲಾಗಿದೆ. ಸುಮಾರು ಅರ್ಧ ಗಂಟೆ ಕಾಲ ನಡೆದ ಎರಡು ಉಡಗಳ ಕಾಳಗವನ್ನು ಕ್ಯಾಮರಾದಲ್ಲಿ ವಸಂತಿ ಕೆ. ಸಾಮೆತಡ್ಕ ಸೆರೆ ಹಿಡಿದಿದ್ದಾರೆ.
ಹೆಣ್ಣು ಉಡಕಾಗಿ ಅಥವಾ ವಾಸಸ್ಥಳದ ಪಾರುಪಥ್ಯಕಾಗಿ ಈ ಕಾಳಗವು ನಡೆಸಿರಬಹುದು. ಅಭಿವೃದ್ಧಿಯ ಕಾರಣದಿಂದಾಗಿ, ನನ್ನ ಸ್ಥಳದಲ್ಲಿ, ಈಗ ಕೆಲವೇ ಕೆಲವು ಉಡಗಳು ಉಳಿದಿವೆ. ಆದರೆ ನನ್ನ ಫಾರ್ಮ್ನಲ್ಲಿ ನೀರು ಮತ್ತು ಕೃತಕ ಕಾಡಿನಿಂದಾಗಿ, ಉಡಗಳು ನೆಲೆಸಿವೆ. ಆದರೆ ದುರಂತವೆಂದರೆ, ಈ ಉಡಗಳು ತಮ್ಮ ನೆಲೆ ಕಳೆದು ಕೊಳ್ಳುತಾ ಇದೆ, ಮತ್ತು ಕೆಲವು ಜನರು ಆಹಾರಕ್ಕಾಗಿ ಬೇಟೆಯಾಡುತ್ತಿದ್ದಾರೆ ಎಂದು ಕೆಲವರ್ಷಗಳಿಂದ ಪಕ್ಷಿ, ಪರಿಸರ ಅಧ್ಯಯನದಲ್ಲಿ ತೊಡಗಿಕೊಂಡಿರುವ ವಸಂತಿ ಅವರು ಹೇಳಿದ್ದಾರೆ.

ನಿಮ್ಮ ಕಾಮೆಂಟ್

Please enter your comment!
Please enter your name here