ಸಂಚಿಕೆ ೨ – ಕವನಗಳು – ಕಾಡಿಂದ ನಾಡು – ಗೀತಾರವಿ

0
510

ರಸ್ತೆ ನಿರ್ಮಾಣ
ಕಾಡುಗಳ ಮರಣ
ಮನೆಗಳ ಜನನ
ಮರಗಳ ಪತನ

ಟೆಲಿಫೋನ್ ಕಂಬಕ್ಕಾಗಿ
ಲೈಟ್ ಕಂಬಕ್ಕಾಗಿ
ಮರಗಳನ್ನುರುಳಿಸಿದರೆ
ನಾಳೆ ನಿಲ್ಲುವುದಲ್ಲ ನಮ್ಮಉಸಿರೇ?

ಮಾಡಿದರೆ ನಾಶ
ಅರಣ್ಯ ಸಂಪತ್ತು
ಕಟ್ಟಿಟ್ಟ ಬುತ್ತಿ
ವಿಪತ್ತು.

ಅರಣ್ಯ ನಾಶ
ಮಾನವನ ವಿನಾಶ
ಎಂದರಿತು ನೀ
ಇನ್ನಾದರೂ ಮನುಜ

ತೋರು ಕರುಣೆ
ಮಾಡು ರಕ್ಷಣೆ
ಅದು ನಿನ್ನ ಹೊಣೆ
ಗಿಡ ಮರ ಬಳ್ಳಿಗೆ

ಹಾಕದಿರು ಕೊಡಲಿ
ಹಸಿರು ತುಂಬಲಿ
ಉಸಿರು ನೀಡಲಿ
ಜೀವಗಳು ಬದುಕಲಿ

-ಗೀತಾರವಿ

ನಿಮ್ಮ ಕಾಮೆಂಟ್

Please enter your comment!
Please enter your name here