“ITಯಿಂದ ಮೇಟಿಗೆ” ಪುಸ್ತಕ ಬಿಡುಗಡೆ ಕಾರ್ಯಕ್ರಮ

0
1195

48 ಮಂದಿ ಸಾಹಿತ್ಯಪೋಷಕರು ಜೊತೆಗೂಡಿ “ITಯಿಂದ ಮೇಟಿಗೆ” ಎಂಬ ಕೃಷಿ ಆಯ್ಕೆಯ ಬಗೆಗಿನ ಅನುಭವ ಕಥನವೊಂದನ್ನು ಓದುಗ ಪ್ರಪಂಚದ ಬೆಳಕಿಗೆ ತರುತ್ತಿದ್ದಾರೆ.

ದಿನಾಂಕ: ಜುಲೈ 1ರಂದು ಈ ಕೃತಿ ಮಂಗಳೂರಿನಲ್ಲಿ ಅನಾವರಣಗೊಳ್ಳುತ್ತಿದೆ.

ಸಮಯ: ಬೆಳಗ್ಗೆ 10.

ಸ್ಠಳ : ಕರ್ಣಾಟಕ ಬ್ಯಾಂಕ್ ಸಭಾಭವನ, ಕೊಡಿಯಾಲಬೈಲ್, ಮಂಗಳೂರು.

ಕೃಷಿಕ, ಪ್ರಾಧ್ಯಾಪಕ ನರೇಂದ್ರ ರೈ ದೇರ್ಲರು ಪುಸ್ತಕದ ವಿಮರ್ಶೆ ಮಾಡಲಿದ್ದಾರೆ. ಕೃಷಿಕ, ಕೃಷಿ ಪ್ರೇರಕ ಶ್ರೀ ಆ. ಶ್ರೀ. ಆನಂದ ಅವರು ಭಾಗವಹಿಸಿ ನಮ್ಮ ಯುವಕರು ಕೃಷಿಗೆ ಮರಳುವರೇ ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ.

ಪ್ರಕಟಣೆಯ ಜವಾಬ್ದಾರಿ ಹೊತ್ತಿರುವ “ಡಿವಿಜಿ ಬಳಗ ಪ್ರತಿಷ್ಠಾನ”ದ ಟ್ರಸ್ಟೀ ಡಾ. ವಿರೂಪಾಕ್ಷ ದೇವರಮನೆಯವರು ಅಧ್ಯಕ್ಷತೆ ವಹಿಸುತ್ತಿದ್ದಾರೆ.

ಅದೇ ದಿನ, ಅದೇ ಸ್ಥಳದಲ್ಲಿ ಜೇಡದ ಜೀವನದ ಕುರಿತು “ಊರ್ಣನಾಭನಿಗೆ ನಮಸ್ಕಾರ” ಎಂಬ ವಿಶೇಷ ಚಿತ್ರ ಪ್ರದರ್ಶನವೂ ನಡೆಯಲಿದೆ. ಅದನ್ನು ನಡೆಸಿಕೊಡಲು ಸುಮುಖ ಜಾವಗಲ್, ಪವನ್ ರಾಮಚಂದ್ರ, ವಿಪಿನ್ ಬಾಳಿಗ, ಡಾ| ಅಭಿಜಿತ್ ಇವರುಗಳು ಬರಲಿದ್ದಾರೆ. ಈ ಪ್ರದರ್ಶನದ ಉದ್ಘಾಟನೆಯನ್ನು ಡಾ|ಮನೋಹರ ಉಪಾಧ್ಯ ಇವರು ಮಾಡಲಿದ್ದಾರೆ.

ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ.

ಎಲ್ಲರಿಗೂ ಮಂಗಳೂರಿಗೆ ಸ್ವಾಗತ ಕೋರುತ್ತಾ,
ವಸಂತ ಕಜೆ, ಕನಕರಾಜು.ಸಿ
ಡಿವಿಜಿ ಬಳಗ ಪ್ರತಿಷ್ಠಾನ

ನಿಮ್ಮ ಕಾಮೆಂಟ್

Please enter your comment!
Please enter your name here