ಆಹ್ವಾನ – AWN ವಾರ್ಷಿಕ ಕಾರ್ಯಕ್ರಮ 2019!

0
205

AWN (Artists for Wildlife and Nature) ವಾರ್ಷಿಕ ಕಾರ್ಯಕ್ರಮದಲ್ಲಿ ಕೆಲವು ಪ್ರತಿಭಾನ್ವಿತ ವನ್ಯಜೀವಿ ಕಲಾವಿದರ ಕಲೆಯನ್ನು ಪ್ರದರ್ಶಿಸಲಾಗುತ್ತದೆ, ಹಾಗು ಅರ್ಹವಾದ ಕಲಾಕೃತಿಗೆ ಹಾಗು ಈ ಪ್ರಮುಖ ಕಲಾ ಪ್ರಕಾರಕ್ಕೆ ತಮ್ಮ ಕೊಡುಗೆಗಾಗಿ ಬಹುಮಾನ ನೀಡಲಾಗುವುದು.

’Artists for Wildlife and Nature’ ಯನ್ನು 2017 ರಲ್ಲಿ ವನ್ಯಜೀವಿ ಕಲಾವಿದರಾದ ಪ್ರಸಾದ್ ನಟರಾಜನ್ ಭಾರತದಲ್ಲಿ ಮೊದಲ ಬಾರಿಗೆ ಸ್ತಾಪಿಸಿದರು. ವನ್ಯಜೀವಿ ಮತ್ತು ಪ್ರಕೃತಿ ಕಲೆಗಳನ್ನು ಉತ್ತೇಜಿಸುವುದು ಅವರ ಪ್ರಮುಖ ಗುರಿಯಾಗಿದೆ. ಅವರು ವನ್ಯಜೀವಿಗಳ ವಿವಿಧ ಪ್ರಕಾರಗಳನ್ನು ಪ್ರೋತ್ಸಾಹಿಸುವ ಮತ್ತು ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರನ್ನು ಬೆಂಬಲಿಸುವ ವೇದಿಕೆಯನ್ನು ಒದಗಿಸಿದ್ದಾರೆ.   AWN ಎನ್ನುವುದು ಪ್ರಕೃತಿಯನ್ನು ತನ್ನ ಶುದ್ಧ ರೂಪದಲ್ಲಿ ಚಿತ್ರಿಸುವುದರಲ್ಲಿ ಬಲವಾಗಿ ನಂಬಿರುವ ಕಲಾವಿದರ ಒಂದು ಗುಂಪು. ಇದರ ಮೂಲಕ ಇದು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸಲು ಅವಶ್ಯಕ ಅರಿವು ಮೂಡಿಸುವುದು, ಹಾಗು ಕಲಾ ಶಿಬಿರಗಳ ಮೂಲಕ AWN ಪ್ರಕೃತಿಯ ಕಲಾವಿದರ ಸಮಾಜವನ್ನು ರಚಿಸುವುದು ಅದರ ಗುರಿ, ಮತ್ತು ಕಲೆಯ ಮೂಲಕ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದೆ. ಹಿಂದಿನ AWN ವಾರ್ಷಿಕ ಕಾರ್ಯಕ್ರಮಗಳಲ್ಲಿ ಕಲಾವಿದರು ಭಾರತದಿಂದ ಮಾತ್ರವಲ್ಲದೇ ವಿಶ್ವದ ಇತರ ಭಾಗಗಳಲ್ಲಿ ಭಾಗವಹಿಸಿ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಿದರು. ಈ ವರ್ಷ AWN ತನ್ನ ಎರಡನೇ ಕಾರ್ಯಕ್ರಮವಾಗಿ ಹಕ್ಕಿಗಳ  ವಿಶೇಷ ಕಾರ್ಯಕ್ರಮವನ್ನು ನಡೆಸಿತು ಹಾಗು ‘Year of the Bird’ ಅದರ ಭಾಗವಾಗಿತ್ತು.

ಈ ವರ್ಷದ AWN ವಾರ್ಷಿಕ ಕಾರ್ಯಕ್ರಮದ ಪ್ರಾಯೋಜಕರು ಹಾಗು ಬೆಂಬಲಿಗರು:

 • ವಿಪುಲ್ ರಾಮನೂಜ್ ಮತ್ತು ಕ್ಯಾಥೆರೆನ್ ಕ್ರಿಶ್ಚಿಯನ್ ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್.
 • ಕೃಷ್ಣ ವೇದವ್ಯಾಸ ಕ್ಯಾನ್ವಾಸ್ ಸ್ಮಾರ್ಟ್
 • ಸಮ್ಮಿಲನ್ ಶೆಟ್ಟಿ ಬಟರ್ಫ್ಲೈ ಪಾರ್ಕ್ನಲ್ಲಿ ಸ್ಥಾಪಕರಾದ ಸಮ್ಮಿಲನ್ ಎಸ್ ಶೆಟ್ಟಿ
 • ಮೆಸ್ಟ್ರಿಯಾ ಪೇಪರ್ ಮತ್ತು ಪೇಪರ್ ಉತ್ಪನ್ನಗಳು
 • ಮೀನಾ ಸುಬ್ರಮಣ್ಯಂ

ಕಾರ್ಯಕ್ರಮದ ಮಾರಾಟದ ಆದಾಯದಿಂದ 10% ನಷ್ಟು ಭಾಗವು ‘ಎ ರೋಚಾ ಇಂಡಿಯಾ’, ಎನ್ಪಿಒಗೆ ವೈಜ್ಞಾನಿಕ ಸಂಶೋಧನೆ, ಪರಿಸರ ಶಿಕ್ಷಣ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ವಿನಿಯೋಗಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ 22 ಹಿರಿಯ ವನ್ಯಜೀವಿ ಕಲಾವಿದರು ಮತ್ತು 13 ಕಿರಿಯ ವನ್ಯಜೀವಿ ಕಲಾವಿದರನ್ನು (18 ವರ್ಷಕ್ಕಿಂತ ಕೆಳಗಿನವು) ಕಾಣಬಹುದು.

ಪ್ರಶಸ್ತಿ ಸಮಾರಂಭದಲ್ಲಿ ರೂ. 45,000 ಸಾವಿರ ಮೊತ್ತದ ನಗದು ಹಾಗು ಗಿಫ್ಟ್ ರಶೀದಿ ಬಹುಮಾನ ನೀಡಲಾಗುವುದು.

 • ಶ್ರೀಲತಾ ಪಿ – ಸಮಗ್ರ ಪ್ರಶಸ್ತಿ ವಿಜೇತೆ ನಗದು ಬಹುಮಾನ-  ವರ್ಷದ ವನ್ಯಜೀವಿ ಕಲಾವಿದೆ – ರೂ: 10,000 (ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್ನಿಂದ ನಗದು ಪ್ರಶಸ್ತಿ)
 • ನಿಧಿ ಮಂಜುನಾಥ್ –  ಸಸ್ತನಿ ವರ್ಗ ವಿಜೇತೆ – ರೂ: 5,000 (ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್ನಿಂದ ಗಿಫ್ಟ್ ಚೀಟಿ)
 • ಪ್ರೇರಣ ಗುಪ್ತಾ – ಏವಿಯನ್ ವರ್ಗ ವಿಜೇತೆ- ರೂ: 5,000 (ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್ನಿಂದ ಗಿಫ್ಟ್ ಚೀಟಿ)
 • ಪ್ರತಿಮಾ ಕುಮಾರ್ – ಲ್ಯಾಂಡ್ಸ್ಕೇಪ್ ಮತ್ತು ಫ್ಲೋರಾ ವರ್ಗ ವಿಜೇತೆ – ರೂ: 5,000 (ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್ನಿಂದ ಗಿಫ್ಟ್ ಚೀಟಿ)
 • ಉಮೇಶ್ ಪ್ರಸಾದ್ – ಶಿಲ್ಪ ವರ್ಗ ವಿಜೇತ- ರೂ: 5,000 (ವೈಲ್ಡ್ ARK- ನೇಚರ್ ಅಂಡ್  ಫೋಟೋಗ್ರಾಫಿ ಅಡ್ವೆಂಚರ್ಸ್ನಿಂದ ಗಿಫ್ಟ್ ಚೀಟಿ)
 • ಸಂಸ್ಕೃತಿ ನಾಯಕ್ – ಓಪನ್ ವರ್ಗ ವಿಜೇತೆ – (ಸಮ್ಮಿಲನ್ ಶೆಟ್ಟಿ ಅವರ ಬಟರ್ಫ್ಲೈ ಪಾರ್ಕ್ ಗಿಫ್ಟ್ ಚೀಟಿ)
 • ನೇಹಾ ಸತೀಶ್ – ವಿದ್ಯಾರ್ಥಿ ವರ್ಗ ವಿಜೇತೆ – ರೂ: 8,000 (ಕ್ಯಾನ್ವಾಸ್ ಸ್ಮಾರ್ಟ್ ಆರ್ಟ್ ಸ್ಟೋರ್ ಗಿಫ್ಟ್ ಚೀಟಿ)

ಸ್ಥಳ:
ವೆಂಕಟಪ್ಪ ಆರ್ಟ್ ಗ್ಯಾಲರಿ
ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀದಿ
ಸಂಪಂಗಿ ರಾಮಗರ, ಬೆಂಗಳೂರು, ಕರ್ನಾಟಕ 560001

ದಿನಾಂಕ: ಜನವರಿ 19 ರಿಂದ ಜನವರಿ 23 2019.

ಗ್ಯಾಲರಿ ಸಮಯ:  ಬೆಳಿಗ್ಗೆ 10 ರಿಂದ ಸಂಜೆ  7 ಗಂಟೆಗೆ.

 • ಪ್ರದರ್ಶನ ಆರಂಭ
  • 3:15 pm ಮುಖ್ಯ ಅತಿಥಿ ಇ. ಸಂತೋಷ್ ಮಾರ್ಟಿನ್ ಪರಿಚಯ
  • ಭಾಗವಹಿಸುವ ಕಲಾವಿದರ ಸಂಕ್ಷಿಪ್ತ ಪರಿಚಯ.
 • ಪ್ರಶಸ್ತಿ ಸಮಾರಂಭ 3:45 ರಿಂದ
  • ಮುಖ್ಯ ಅತಿಥಿಯ ಭಾಷಣ.
  • AWN ಮತ್ತು ಅದರ ಚಟುವಟಿಕೆಗಳ ಪರಿಚಯ.
  • ಭಾಗವಹಿಸುವ ಕಲಾವಿದರಿಗೆ ಮತ್ತು ವಿವಿಧ ವರ್ಗದ ವಿಜೇತರಿಗೆ ಪ್ರಶಸ್ತಿ ಪ್ರಧಾನ.
  • “ವರ್ಷದ ಕಲಾವಿದ” ಪ್ರಶಸ್ತಿ ಪ್ರಧಾನ.
  • ಧನ್ಯವಾದ ಸಮರ್ಪಣೆ ಭಾಷಣ.
  • ಗ್ಯಾಲರಿ ವೀಕ್ಷಣೆ.
 • ಲಘು ಉಪಾಹಾರ ವಿರಾಮ

ಪ್ರಸಾದ್ ನಟರಾಜನ್
(ವನ್ಯಜೀವಿ ಕಲಾವಿದ-AWN Artists for Wildlife and Nature ಸ್ಥಾಪಕ)
ಫೋನ್: 9845199480
ಇಮೇಲ್: artistsforwildlifenature@gmail.com

ನಿಮ್ಮ ಕಾಮೆಂಟ್

Please enter your comment!
Please enter your name here