ಪಶ್ಚಿಮ ಘಟ್ಟದ ಕಾಡಿನಲ್ಲಿ ಹಗಲು ಹೊತ್ತಿನಲ್ಲಿ ಬೇಟೆಗಾರರ ಹಾವಳಿ

0
138
Copyright: Dinesh Holla

ಮಂಗಳೂರಿನ ‘ಸಹ್ಯಾದ್ರಿ ಸಂಚಯ’ ತಂಡದ ಪ್ರಮುಖ, ಶ್ರೀ ದಿನೇಶ ಹೊಳ್ಳ ರವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, ತಾವು ಚಾರಣಕ್ಕೆ ಹೋದಾಗ ತಮಗಾದ ಅನುಭವವನ್ನು ಈ ಕೆಳಗಿನಂತೆ ವಿವರಿಸಿದಾರೆ..

ಪಶ್ಚಿಮ ಘಟ್ಟದ ಕೊಟ್ಟಿಗೆಹಾರ ಸಮೀಪದ ಬಾಳೂರು ಮೀಸಲು ಅರಣ್ಯದಲ್ಲಿ ವನ್ಯಜೀವಿಗಳ ಬೇಟೆಗಾರರು ರಾಜಾರೋಷವಾಗಿ ಹಗಲು ಹೊತ್ತಿನಲ್ಲೇ ಕೋವಿ, ಕತ್ತಿ ಹಿಡಿದುಕೊಂಡು ತಿರುಗುತ್ತಿದ್ದಾರೆಂದರೆ ಅಲ್ಲಿನ ಅರಣ್ಯ ಇಲಾಖೆಯ ಬಗ್ಗೆ ಯಾವ ಭಯವೂ ಇಲ್ಲದೆ ಇವರ ಅಟ್ಟಹಾಸ ಮೆರೆಯುತ್ತಿದೆ ಎಂದರೆ ಅರಣ್ಯದ ಸಂರಕ್ಷಣೆ ಯಾವ ರೀತಿ ಎಂಬುದನ್ನು ಗಮನಿಸಬಹುದು. ಮೂವತ್ತು ಜನ ಕಳ್ಳ ಬೇಟೆಗಾರರು ಕಾಡು ಕಣಿವೆಯಲ್ಲಿ ಸುತ್ತಾಡುತ್ತಾ ವನ್ಯಜೀವಿಗಳನ್ನು ಹುಡುಕುತಿದ್ದಾರೆ. ಹತ್ತಿರದ ಮಲೆಮನೆ ಎಂಬ ಹಳ್ಳಿಯಿಂದ ವಾಹನ ಸಮೇತ ಬಂದು ಈ ರೀತಿ ಬೇಟೆಯಾಡುತ್ತಿದ್ದಾರೆಂದರೆ ಇದು ಇಲಾಖೆಯ, ಸರಕಾರದ ಬೇಜವಾಬ್ದಾರಿತನಕ್ಕೆ ಒಂದು ಉದಾಹರಣೆ. ಈ ಬಗ್ಗೆ ಇಂದು ಅರಣ್ಯ ಸಚಿವರಿಗೆ, ಮೂಡಿಗೆರೆ ಅರಣ್ಯ ಇಲಾಖೆಗೆ ದೂರು ನೀಡಿರುತ್ತೇವೆ…ಪ್ರತ್ಯುತ್ತರ ಬಂದದ್ದು ಇಷ್ಟೇ ‘ವಿಚಾರಿಸುತ್ತೇವೆ’ ಎಂಬ ಶಬ್ದ ಮಾತ್ರ. ಅರಣ್ಯ ಸಂರಕ್ಷಣೆ ಕಾಯಿದೆ, ವನ್ಯಜೀವಿ ಸಂರಕ್ಷಣೆ ಕಾಯಿದೆ, ಮೀಸಲು ಅರಣ್ಯ ಕಾಯಿದೆ ಎಲ್ಲವೂ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದ್ದು ಕಾನೂನು ಜಾರಿಯಲ್ಲಿ ಎಲ್ಲವೂ ಶೂನ್ಯ. ಬಲ್ಲವರು ಬಲ್ಲಿದರಾಗಿ, ಉಳ್ಳವರು ಕೊಳ್ಳುವವರಾದರೆ ಏನು ಉಳಿದೀತು ಇಲ್ಲಿ ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಉತ್ತರಗಳು ತತ್ತರಗಳಾಗಿ ಎತ್ತರದಲ್ಲೇ ಉಳಿದು ಬಿಡುತ್ತವೆ

https://www.facebook.com/dinesh.holla/posts/1366433360148929

 

ನಿಮ್ಮ ಕಾಮೆಂಟ್

Please enter your comment!
Please enter your name here