ಶೀಘ್ರದಲ್ಲೇ ಡಿಸ್ಕವರಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ರಂತಹ ಚಾನೆಲ್ “ಡಿಡಿ ಪ್ರಕೃತಿ”

0
19714

ಭಾರತದಲ್ಲಿ ಮತ್ತು ಭಾರತೀಯರು ಪ್ರಕೃತಿಯ ಸಂರಕ್ಷಣಾ ಚಲನಚಿತ್ರಗಳನ್ನು ಪ್ರಚಾರ ಮಾಡುವ ವಿಶಿಷ್ಟವಾದ “ಡಿಡಿ ಪ್ರಕೃತಿ” ಚಾನೆಲ್ 2018 ರಲ್ಲಿ ಪ್ರಾರಂಭವಾಗಲಿದೆ ಮತ್ತು 2031 ರವರೆಗೆ ಪರಿಣಾಮಕಾರಿಯಾದ ರಾಷ್ಟ್ರೀಯ ವನ್ಯಜೀವಿ ಕಾರ್ಯ ಯೋಜನೆ (National Wildlife Action Plan – NWAP) ಯ ಅವಧಿಯ ಮೂಲಕ ಮುಂದುವರಿಯುತ್ತದೆ.

ಈ ತಿಂಗಳ ಪರಿಸರ, Ministry of Environment, Forest and Climate Change (MoEFCC) ಸಚಿವಾಲಯವು ಬಿಡುಗಡೆ ಮಾಡಿದ ಮೂರನೆಯ NWAP (2017-2031), ಯೋಜನಾ ಅವಧಿಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮತ್ತು ದೂರದರ್ಶನದ ಸಹಯೋಗದೊಂದಿಗೆ, ದೇಶದಲ್ಲಿ ನೈಸರ್ಗಿಕ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಚಾನೆಲ್ ‘ಡಿಡಿ-ಪ್ರಕೃತಿ’ ಪ್ರಾರಂಭವಾಗಲಿದೆ ಹಾಗು ಈ ಯೋಜನಾ ಅವಧಿಯವರೆಗೆ ಚಾನಲ್ ಮುಂದುವರಿಯುವಂತೆ ಸೂಚಿಸಿದೆ.

“ಹೊರದೇಶಗಳಿಂದ ಬಂದ ಡಿಸ್ಕವರಿ ಚಾನಲ್ ಮತ್ತು ನ್ಯಾಶನಲ್ ಜಿಯಾಗ್ರಫಿಕ್ ಅನ್ನು ವೀಕ್ಷಿಸುವ ಬದಲು, ಇಲ್ಲಿ ಭಾರತೀಯರು ಮಾಡಿದ ಪ್ರಕೃತಿ ಚಲನಚಿತ್ರಗಳನ್ನು ಉತ್ತೇಜಿಸಲು ಮತ್ತು ಪ್ರಕೃತಿಯ ಬಗ್ಗೆ ತೋರಿಸಲು ಬಹಳಷ್ಟು ವಸ್ತುಗಳಿವೆ” –  ವಿವೇಕ್ ಮೆನನ್ (ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯ ಮತ್ತು ವನ್ಯಜೀವಿ ಟ್ರಸ್ಟ್ (ವಿಟಿಐ) ಸಿಇಒ).

“ಪ್ರಕೃತಿ ಸಾಕ್ಷರತೆಯು” ಭಾರತದ ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಪ್ರಭಾವ ಬೀರುವ ಬೌದ್ಧಿಕ ಸಾಮಾಜಿಕ-ಆರ್ಥಿಕ ಬದಲಾವಣೆಯನ್ನು ನಕಾರಾತ್ಮಕವಾಗದಿರುವಂತೆ ಖಚಿತ ಪಡಿಸುತ್ತದೆ ಎಂದು NWAP ಉಲ್ಲೇಖಿಸಿತು.

ಅಸ್ಸಾಂನಲ್ಲಿರುವ ಕಾಜಿರಂಗಾ ಹುಲಿ ಮೀಸಲಿನಲ್ಲಿ ಸರಕಾರವು “ruthless anti-poaching strategy”ಯನ್ನು ತಪ್ಪಾಗಿ ವರದಿಮಾಡಿದ ಆಧಾರದಲ್ಲಿ, ಏಪ್ರಿಲ್ನಲ್ಲಿ, ಕೇಂದ್ರ ಸರಕಾರವು ಬಿ ಬಿ ಸಿ ಯನ್ನು ಭಾರತದ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಐದು ವರ್ಷಗಳ ಕಾಲ ಚಿತ್ರೀಕರಿಸುವುದನ್ನು ನಿಷೇಧಿಸಿತು.

ನಿಮ್ಮ ಕಾಮೆಂಟ್

Please enter your comment!
Please enter your name here