ಛಾಯಾಗ್ರಾಹಕ ಅವಲೋಕಿಸಿದಂತೆ – ದಿನೇಶ್ ಚಲವಾದಿ

0
316

ಮನುಷ್ಯನು ಹೇಗೆ ತನ್ನ ಭೂಪ್ರದೇಶವನ್ನು ಬೇಲಿ ಹಾಕಿಕೊಂಡು, ಇತರರು ಅತಿಕ್ರಮಣ ಮಾಡದಂತೆ ಕಾಪಾಡಿಕೊಳ್ಳುತ್ತಾನೋ, ಅದೇ ರೀತಿ ಪ್ರಾಣಿಗಳೂ ಸಹ ತಮ್ಮ ತಮ್ಮ ಕ್ಷೇತ್ರವನ್ನು ಬೇರೆ ಪ್ರಾಣಿಗಳು ಅತಿಕ್ರಮಣ ಮಾಡದಂತೆ ನೋಡಿಕೊಳ್ಳುತ್ತವೆ. ಅನೇಕ ಪ್ರಾಣಿಗಳು ತಮ್ಮ ಪ್ರದೇಶಗಳನ್ನು ಗುರುತಿಸಲು ಮೂತ್ರವನ್ನು ಸಿಂಪಡಿಸುವುದು, ಮಲವನ್ನು ಹಾಕುವುದು, ತಮ್ಮ ವಾಸನೆ ಗ್ರಂಥಿಗಳನ್ನು ಭೂಪ್ರದೇಶಗಳ ಗಡಿಯ ಸುತ್ತ ಉಜ್ಜುವುದು ಇತ್ಯಾದಿಗಳನ್ನು ಮಾಡುತ್ತವೆ.

ಈ ಭೂಪ್ರದೇಶವನ್ನು ಸಮೀಪಿಸುವ ಇತರ ಪ್ರಾಣಿಗಳು, ಈ ವಾಸನೆಯನ್ನು ಗ್ರಹಿಸಿ, ಆ ಜಾಗದಿಂದ ಕಾಲ್ಕೀಳುತ್ತವೆ. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಎರಡು ಪ್ರಾಣಿಗಳು ಎದುರು ಬದರು ಆಗುವ ಸಂದರ್ಭ ಬಂದರೆ, ಪ್ರಾಣಿಗಳ ನಡುವೆ ದೊಡ್ಡ ಹೋರಾಟವೇ ನಡೆಯುತ್ತದೆ. ಕೆಲವೊಮ್ಮೆ ಅವು ಪರಸ್ಪರ ಸ್ಪರ್ಶಿಸದೇ, ಕೇವಲ ಚಲನವಲನದಿಂದ, ಭಾವ ಭಂಗಿಗಳ ಮೂಲಕ (ರೋಮ ನಿಮಿರಿಸುವುದು, ಹಕ್ಕಿಗಳು ತನ್ನ ರೆಕ್ಕೆಯನ್ನು ಉಬ್ಬಿಸುವುದು ಇತ್ಯಾದಿ) ಪರಸ್ಪರ ಬೆದರಿಕೆ ಒಡ್ಡಬಹುದು. ನಿಜವಾದ ಹೋರಾಟ ಸಾಮಾನ್ಯವಾಗಿ ವಿಪರೀತ ಪರಿಸ್ಥಿತಿಗಳಲ್ಲಿ, ಅಥವಾ ಸಂಪನ್ಮೂಲಗಳ ಕೊರತೆ ಇದ್ದಾಗ ನಡೆಯುತ್ತದೆ. ಇದರಲ್ಲಿ ಪ್ರಾಣಿಗಳಿಗೆ ಗಂಭೀರ ಗಾಯಗಳಾಗಬಹುದು, ಮತ್ತು ರೋಗಗ್ರಸ್ಥ ಪ್ರಾಣಿಗಳು ಸಾವನಪ್ಪಬಹುದು. ಇಂತಹ ಹೋರಾಟಗಳು ಕಾಡಿನಲ್ಲಿ ನೈಸರ್ಗಿಕವಾಗಿ ಪ್ರಾಣಿಗಳ ಸಮತೋಲನ ಕಾಪಾಡಿಕೊಳ್ಳುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ.

© ದಿನೇಶ್ ಚಲವಾದಿ
© ದಿನೇಶ್ ಚಲವಾದಿ

ದಿನೇಶ್ ಚಲವಾದಿ ರವರು ಕಂಡ ಇಂತಹದೇ ಒಂದು ಕ್ಷೇತ್ರೀಯ ಹೋರಾಟವನ್ನು ಹೀಗೆ ವರ್ಣಿಸಿದ್ದಾರೆ.

ಅಂದು ಕಬಿನಿ ಅಭಯಾರಣ್ಯದಲ್ಲಿ ಧಗ ಧಗ ಬಿಸಿಲು, ಕೊಳಗಳೆಲ್ಲಾ ಬತ್ತಿ ಹೋಗಿವೆ. ಟೈಗರ್ ಟ್ಯಾಂಕ್ ನಲ್ಲಿ ಬೋರ್ ವೆಲ್ ವ್ಯವಸ್ಥೆ ಇರುವುದರಿಂದ ಆ ಕೊಳದಲ್ಲಿ ಮಾತ್ರ ನೀರು ತುಂಬಿತ್ತು. ನಮ್ಮ ಸಫಾರಿ ಜೀಪ್ ಅದೇ ಕೊಳದ ಬಳಿ ಬಂದು ನಿಂತಿತ್ತು. ಟೈಗರ್ ಟ್ಯಾಂಕ್ ಪ್ರದೇಶದಲ್ಲಿ ವಾಸವಾಗಿದ್ದ ಒಂದು ಕಡವೆಯ ಕುಟುಂಬವು (ಒಂದು ಗಂಡು ಮತ್ತು ಒಂದು ಹೆಣ್ಣು) ಕೊಳದಲ್ಲಿ ನೀರು ಕುಡಿಯುತ್ತಿದ್ದವು. ಇದೇ ಸಮಯಕ್ಕೆ ನೀರನ್ನರಸಿ ಇನ್ನೊಂದು ಕಡವೆ ಕುಟುಂಬವು ತನ್ನ ಪ್ರದೇಶವನ್ನು ಬಿಟ್ಟು, ಟೈಗರ್ ಟ್ಯಾಂಕ್ ಬಳಿ ಬಂದವು. ಆಗ ಅಲ್ಲಿ ಶುರುವಾಯಿತು ಕಡವೆಗಳ ಕ್ಷೇತ್ರೀಯ ಸಮರ.

© ದಿನೇಶ್ ಚಲವಾದಿ
ದಿನೇಶ್ ಚಲವಾದಿ

ನಿಮ್ಮ ಕಾಮೆಂಟ್

Please enter your comment!
Please enter your name here