ಚಾರ್ಮಾಡಿ ಘಾಟಿಯ ಬಾರಿಮಲೆ, ಸೋಮನಕಾಡು ಕಣಿವೆಯಲ್ಲಿ ಕಾಡ್ಗಿಚ್ಚು

0
277

ದಿನೇಶ್ ಹೊಳ್ಳ, ಸಂಚಾಲಕರು, ಸಹ್ಯಾದ್ರಿ ಸಂಚಯ, ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ, ಈ ಕೆಳಗಿನಂತೆ ಬರೆಯುತ್ತಾರೆ.

“ಚಾರ್ಮಾಡಿ ಘಾಟಿಯ ಬಾರಿಮಲೆ, ಸೋಮನಕಾಡು ಕಣಿವೆಯಲ್ಲಿ ಇಂದು ಕಾಡ್ಗಿಚ್ಚು ಹರಡಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ಆಗುತ್ತಿರುವ ಕಾಡ್ಗಿಚ್ಚು ಈಗಲೇ ಆರಂಭವಾಯಿತೆಂದರೆ ಇದು ಮುಂದಿನ ಮಳೆಗಾಲದ ಹಾಗೂ ನೇತ್ರಾವತಿ ಹರಿವಿನ ನೆಮ್ಮದಿಗೆ ಧಕ್ಕೆ ತರುವ ವಿಚಾರ. ಬಾರಿಮಲೆಯ ಸೋಮನಕಾಡು ಅರಣ್ಯ ಪ್ರದೇಶವು ನೇತ್ರಾವತಿಯ ಉಪನದಿಗಳಾದ ಅಣಿಯೂರು ಹೊಳೆ, ಸುನಾಲಾ ಹೊಳೆ, ನೆರಿಯಾ ಹೊಳೆಗಳ ಮೂಲ ಪ್ರದೇಶವಾಗಿದ್ದು ಜೀವ ವೈವಿದ್ಯತೆಯ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಮಳೆ ನೀರನ್ನು ಇಂಗಿಸಿಕೊಳ್ಳುವಂತಹ ಹುಲ್ಲುಗಾವಲು ಹಾಗೂ ಶೋಲಾರಣ್ಯ ಈ ಪ್ರದೇಶದಲ್ಲಿದ್ದು ಅರಣ್ಯ ಕಾಯಿದೆ, ವನ್ಯಜೀವಿ ಕಾಯಿದೆ ಪ್ರಕಾರ ಇಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಆದರೆ ಬಾಂಜಾರುಮಲೆ, ಅಂಬಟ್ಟಿಮಲೆ, ಇಲಿಮಲೆ, ಬಾರಿಮಲೆ ಅಡವಿ ಪ್ರದೇಶವನ್ನು ಖಾಸಗಿ ಎಸ್ಟೇಟು ಮಾಲೀಕರು ಸಂಪೂರ್ಣ ಕಬಳಿಸಿಕೊಂಡು ಈ ರೀತಿ ಬೆಂಕಿ ಹಾಕುತ್ತಿದ್ದಾರೆ, ಅವರ ಅರಣ್ಯ ಅತಿಕ್ರಮಣವನ್ನು ತೆರವು ಗೊಳಿಸುವುದು ಬಿಟ್ಟು ನಮ್ಮ ದರಿದ್ರ ರಾಜಕಾರಣಿಗಳು ಅವರು ಕೊಡುವ ಎಂಜಲು ಕಾಸಿಗೆ ಜೊಲ್ಲು ಸುರಿಸುತ್ತಾ ಕಾದು ಕುಳಿತಿದ್ದಾರೆ. ಇಂತಹವರಿಂದ ಪಶ್ಚಿಮ ಘಟ್ಟ ಸಂರಕ್ಷಣೆಯಂತೆ…?!”

https://www.facebook.com/dinesh.holla/posts/1429828717142726

ನಿಮ್ಮ ಕಾಮೆಂಟ್

Please enter your comment!
Please enter your name here