

ತ್ತಂತ್ರಾಕ ಮಾಹಿತ್ರ: ಕಾಯಮೆರಾ ಕಾಯನ್ನ್ 1DX ಮಾಕ್ಾ II, ಲನ್ಾ – 500mm, Mode – ಅಪಚಾರ್ ಪ್ಾಯೀರಿಟಿ F7.1, ಷಟರ್ ಸಿೆೀಡ್ 1/400, ಐಸ್ಓ 640, ಮಿೀಟರಿಂಗ್ – Evaluative.
ನವೆಂಬರ್ ೨೦೧೪ ರಲ್ಲಿ ಕರಿ ಚಿರತೆಯನ್ನು ಕೇವಲ ಒಂದು ಕ್ಷಣ ನೋಡಿದ್ದಾಗಿನಿಂದ, ನಾನು ಕಬಿನಿಗೆ ನಿಯಮಿತ ಪ್ರವಾಸಿ ಯಾಗಿದ್ದೇನೆ. ಕರಿ ಚಿರತೆಯ ಒಂದು ನೋಟಕ್ಕಾಗಿ, ಪ್ರತಿ ತಿಂಗಳು ನಾನು ಕಬಿನಿಗೆ ಹೋಗಲಾರಂಭಿಸಿದೆ. ಕರಿ ಚಿರತೆ ನಿನ್ನೆ ಕಂಡಿತು, ಹೋದ ವಾರ ಕಂಡಿತು, ಹೋದ ತಿಂಗಳು ಇಲ್ಲೇ ಕಂಡಿತು ಎಂಬ ಮಾತುಗಳು ಎರಡು ವರ್ಷಗಳಿಂದ ಕೇಳಿ ಬರುತ್ತಿತ್ತು. ನನ್ನ ಸರದಿ ಇನ್ನೂ ಬಂದಿರಲಿಲ್ಲ, ಆದರೆ ಮನಸ್ಸಿ ನಲ್ಲಿ ನನ್ನ ಸರದಿ ಬಂದೇ ಬರುತ್ತದೆ ಎಂಬ ನಂಬಿಕೆ ಇತ್ತು.
ಇದೇ ವರ್ಷ ಫೆಬ್ರವರಿ ೨೦೧೭ರಲ್ಲಿ, ನಾನು ಕಬಿನಿಯಲ್ಲಿ ೪ ಸಫಾರಿಗಳನ್ನು ಕಾಯ್ದಿರಿಸಿದ್ಧೆ. ಮೊದಲ ಸಫಾರಿಯಲ್ಲಿ ಕರಿ ಚಿರತೆಯ ಒಂದು ತುಣುಕು ನೋಡಲು ಸಿಕ್ಕಿತು. ಎರಡನೇ ಸಫಾರಿಯಲ್ಲಿ ಏನೂ ನೋಡಸಿಗಲಿಲ್ಲ.
ಮೂರನೇ ಸಫಾರಿ ಪ್ರಾರಂಭವಾಯಿತು. ನಾನು ದೇವರನ್ನು ಎರಡು ನಿಮಿಷ ಬೇಡಿಕೊಂಡೆ. ಇನ್ನೇನು ಸಫಾರಿ ಮುಗಿಯುತ್ತಿದೆ ಅನ್ನುವಾಗ ನಮ್ಮ ನಿಸರ್ಗವಾದಿ ಜೀಪನ್ನು ನಿಲ್ಲಿಸಲು ಹೇಳಿದರು. ನಾವು ಪವರ್ ಲೈನ್ ಹತ್ತಿರ (ಕಬಿನಿಯ ಒಂದು ಸ್ಥಳ) ಜೀಪ್ ನಿಲ್ಲಿಸಿದೆವು. ದೂರದ ಮರದಲ್ಲಿ ರಂಬೆ ಕೊಂಬೆಗಳ ನಡುವಿನಲ್ಲಿ ಕಾಡಿನ ಭೂತ ಎಂದೇ ಕರಿಯಲ್ಪಡುವ ಕರಿ ಚಿರತೆ ಕುಳಿತ್ತಿತ್ತು. ಅಬ್ಬಾ ಇಷ್ಟು ವರ್ಷದ ಮೇಲಾದರೂ ಕೆಲವು ಕ್ಷಣ ಸರಿಯಾಗಿ ನೋಡಲು ಸಿಕ್ಕಿತ್ತಲ್ಲ ಎಂದು ಸಂತೋಷವಾಯಿತು.
ನಾಲ್ಕನೇ ಸಫಾರಿ , ಹೊರಡುವ ಮುನ್ನ ಮತ್ತೆ ದೇವರನ್ನು ಎರಡು ನಿಮಿಷ ಬೇಡಿಕೊಂಡೆ. ಸಮಯ ಸುಮಾರು ಬೆಳಿಗ್ಗೆ ೮:೦೦ ಗಂಟೆಯಾಗಿತ್ತು, ಪ್ರಾಣಿಗಳು ಕೊಡುವ ಎಚ್ಚರಿಕೆಯ ಕರೆಯನ್ನು ಆಲಿಸಿ ನಾವು ಕೆವಿ ಜಂಕ್ಷನ್ (ಕಬಿನಿಯ ಒಂದು ಸ್ಥಳ) ಹತ್ತಿರ ಬಂದು ಕಾಯುತ್ತಿದ್ದೆವು. ನಮ್ಮ ನಿಸರ್ಗವಾದಿ ಎಲ್ಲಾ ಕಡೆ ಹುಡುಕುತ್ತಾ ಇದ್ದರು. ನಮ್ಮ ವಾಹನ ಚಾಲಕ ‘ಸಾರ್ ಬ್ಲ್ಯಾಕಿ ,ಬ್ಲ್ಯಾಕಿ’ ಎಂದು ನಮ್ಮ ಗಾಡಿಯ ಹಿಂದೆ ನೋಡಲು ಹೇಳಿದರು. ಪೊದೆಗಳ ಮರೆಯಿಂದ ಹೊರಗೆ ಬಂತು ನಾನು ನೋಡಬೇಕೆಂದು ಸದಾ ಬಯಸುತ್ತಿದ್ದ ಕರಿ ಚಿರತೆ. ೧೫ರಿಂದ ೨೦ ನಿಮಿಷಗಳವರೆಗೆ ನಮ್ಮ ಕಣ್ಣ ಮುಂದೆ ನಾನಾ ರೀತಿಯ ಚಟುವಟಿಕೆಗಳನ್ನು ಮಾಡಿತು. ಮಣ್ಣಲ್ಲಿ ಹೊರಳಾಡಿ, ತನ್ನ ಗಡಿಯ ಗುರುತನ್ನು ಹಾಕಿ ಮತ್ತೆ ಕಾಡಿನಲ್ಲಿ ಮರೆಯಾಗುವ ಮುನ್ನ ನಮ್ಮ ಕಡೆ ತಿರುಗಿ ಒಂದು ದಿಟ್ಟ ನೋಟವನ್ನು ಬೀರಿತು.
ಅದು ಮರೆಯಾದ ಕ್ಷಣ, ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ, ನಾವು ಚಿತ್ತ ಮನಸ್ಸಿನಿಂದ ದೇವರನ್ನು ಬೇಡಿದರೆ, ನಮ್ಮ ಆಸೆ ನೆರೆವೇರುವುದು ಎಂದು. ಶತಪ್ರಯತ್ನ, ಹಾಗೂ ಛಲವಿದ್ದರೆ ಏನನ್ನೂ ಪಡೆಯಬಹುದು ಎಂಬುವುದಕ್ಕೆ ಇದೊಂದು ನಿದರ್ಶನ.
