ಕಾಡುನಾಡು ಬಗ್ಗೆ

‘ಕಾಡುನಾಡು’ ಎಂಬುದು ಕನ್ನಡದ ವನ್ಯಜೀವಿ ಸಂಬಂಧಿತ ತ್ರೈಮಾಸಿಕ ಅಂತರಜಾಲ ಪತ್ರಿಕೆಯಾಗಿದೆ. ವನ್ಯಜೀವಿಗಳನ್ನು ಪ್ರೀತಿಸುವವರಿಗೆ, ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ದೇಶ ವಿದೇಶಗಳಲ್ಲಿರುವ ಎಲ್ಲಾ ಕನ್ನಡಿಗರಿಗೆ ಉಪಯುಕ್ತವಾಗಲೆಂದು ‘ಕಾಡುನಾಡು’ ಕನ್ನಡ ವನ್ಯ ಜೀವಿ ಪತ್ರಿಕೆ ಉಚಿತವಾಗಿ ಅಂತರಜಾಲದಲ್ಲಿ ಲಭ್ಯವಾಗಲಿದೆ.

ಈ ಪತ್ರಿಕೆಯ ಮೂಲಕ ನಾವು ಜನರಲ್ಲಿ ಕಾಡಿನ ಬಗ್ಗೆ, ಕಾಡಿನ ಜೀವರಾಶಿಗಳ ಬಗ್ಗೆಯಷ್ಟೇ ಅಲ್ಲದೇ ನಾಡಿನಲ್ಲಿರುವ ಪ್ರಾಣಿಪಕ್ಷಿಗಳ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅರಣ್ಯಸಂಪತ್ತಿನ ಉಳಿವಿಗಾಗಿ ಹಾಗೂ ಅದರ ಕ್ಷೇಮಕ್ಕಾಗಿ ದುಡಿಯುವವರ ಬಗ್ಗೆಯೂ ಈ ಪತ್ರಿಕೆ ವಿಶೇಷ ಮಾಹಿತಿ ನೀಡಲಿದೆ.

ಈ ನಮ್ಮ ಪ್ರಯತ್ನಕ್ಕೆ ಕನ್ನಡಿಗರೆಲ್ಲರ ಆಶೀರ್ವಾದವನ್ನು ಬಯಸುತ್ತಿದ್ದೇವೆ.